ನಮ್ಮ ಬಗ್ಗೆ


ಕಾರ್ಮಿಕ ಇಲಾಖೆಯು ಸರ್ಕಾರದ ಹಳೆ ಇಲಾಖೆಗಳಲ್ಲಿ ಒಂದು ಪ್ರಮುಖ ಇಲಾಖೆಯಾಗಿದೆ ಮತ್ತು ಕಾರ್ಮಿಕ ಕಲ್ಯಾಣದ ಜೊತೆಗೆ ಸುಗಮ ಕೈಗಾರಿಕಾ ಬಾಂಧವ್ಯಗಳ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕಾರ್ಮಿಕ ಕಾನೂನುಗಳ ಜಾರಿಗೊಳಿಸುವಿಕೆ ಮತ್ತು ಕೈಗಾರಿಕಾ ಶಾಂತಿಯನ್ನು ಉತ್ತೇಜಿಸುವ ಚಟುವಟಿಕೆಗಳು ಏಕ ಕಾಲದಲ್ಲಿ ಇಲಾಖೆಯ ಮೂಲಕ ನಡೆಸಲ್ಪಡುತ್ತವೆ. ಇದರಿಂದಾಗಿ ಕೈಗಾರಿಕಾ ಬೆಳವಣಿಗೆ ಮತ್ತು ಕಾರ್ಮಿಕ ಕಲ್ಯಾಣದ ಅವಳಿ ಉದ್ದೇಶಗಳನ್ನು ಸಾಧಿಸಬಹುದಾಗಿದೆ. ರಾಜ್ಯಮಟ್ಟದಲ್ಲಿ ಇಲಾಖೆಯು ಮಾನ್ಯ ಕಾರ್ಮಿಕ ಸಚಿವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಅವರ ಕಾರ್ಯದಲ್ಲಿ ನೆರವಾಗುತ್ತಾರೆ. ಮಾನ್ಯ ಕಾರ್ಮಿಕ ಸಚಿವರ ನಿಯಂತ್ರಣದಲ್ಲಿ ಈ ಇಲಾಖೆಯ 3 ಕ್ಷೇತ್ರ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಇವರ ನಿಯಂತ್ರಣ ಮತ್ತು ಸಮನ್ವಯಕ್ಕೆ ಒಳಪಟ್ಟಿರುತ್ತದೆ.

3 ಕ್ಷೇತ್ರ ಇಲಾಖೆಗಳು :-

ಕಾರ್ಮಿಕ ಇಲಾಖೆ:

ವಿವಿಧ ಕಾರ್ಮಿಕ ಕಾನೂನುಗಳನ್ನು ಅನುಷ್ಟಾನಗೊಳಿಸುವ ಮೂಲಕ ಕಾರ್ಮಿಕರ ಮಜೂರಿ, ಕೆಲಸದ ಸ್ಥಿತಿಗತಿ ಮತ್ತು ಕೈಗಾರಿಕಾ ಬಾಂಧವ್ಯ ಹಾಗೂ ಕಲ್ಯಾಣ ಕ್ರಮಗಳನ್ನು ಜಾರಿಗೊಳಿಸುವುದು.

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ:

ಕಾರ್ಖಾನೆಗಳ ಕಾಯ್ದೆ 1948 ಹಾಗೂ ಬಾಯ್ಲರ್ಸ್ ಕಾಯ್ದೆ 1923 ಗಳನ್ನು ಜಾರಿಗೊಳಿಸುವ ಮೂಲಕ ಕೈಗಾರಿಕಾ ಸುರಕ್ಷತೆ ಆರೋಗ್ಯ ಔದ್ಯೋಗಿಕ ಕಾಯಿಲೆಗಳು ಮತ್ತು ಕಾರ್ಖಾನೆಗಳ ಕಾರ್ಯಚಟುವಟಿಕೆಗಳನ್ನು ಅನುಷ್ಟಾನಗೊಳಿಸುವುದು.

ಕಾರ್ಮಿಕರ ರಾಜ್ಯ ವಿಮಾ ಯೋಜನೆ (ವೈಧ್ಯಕೀಯ ಸೇವೆಗಳ ಇಲಾಖೆ)

ಇಎಸ್ಐ ಯೋಜನೆಯ ಸದಸ್ಯರಾಗಿರುವ ಕಾರ್ಮಿಕರಿಗೆ ಆಸ್ಪತ್ರೆಗಳ ಔಷಧಾಲಯಗಳ ಚಾಲನೆ ಮೇಲಿನ ಎಲ್ಲಾ 3 ಇಲಾಖೆಗಳ ಮುಖ್ಯಸ್ಥರು ಸ್ವತಂತ್ರವಾಗಿ ತಮ್ಮ ಇಲಾಖೆಗಳ ಕೆಲಸವನ್ನು ನೋಡಿಕೊಳ್ಳತ್ತಿದ್ದು, ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಸಚಿವಾಲಯ ಇವರ ಮೂಲಕ ನೇರವಾಗಿ ಕಾರ್ಮಿಕ ಸಚಿವರಿಗೆ ವರದಿ ಮಾಢುತ್ತಾರೆ.